ಶ್ರೀ ಮುಂಡರಗಿ ಶಿವರಾಯ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಾನ್ವಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಇಂದು ಇದು ಎಲ್ಲಾ ಸದಸ್ಯರ ಏಳಿಗೆಗಾಗಿ ಮತ್ತು ಸಣ್ಣ ಪುಟ್ಟ ಮಟ್ಟದಿಂದ ಹಿಡಿದು ದೊಡ್ಡ ಮಟ್ಟದ ರೈತರು, ಸ್ವ-ಉದ್ಯೋಗಸ್ಥರು, ವ್ಯಾಪಾರ ವಹಿವಾಟು ಮಾಡುವವರೆಲ್ಲರಿಗೂ ಆರ್ಥಿಕ ಸಹಾಯದ ಜೊತೆಗೆ ವಿವಿಧ ಸೇವೆಗಳಾದ RTGS/NEFT/IMPS/E-Stamp ಮತ್ತು ಠೇವಣಿಗಳ ಮೇಲಿನ ಬಡ್ಡಿ ಇನ್ನಿತರ ಸೇವೆಗಳನ್ನು ಅತ್ಯಂತ ವೇಗವಾಗಿ ಹಾಗೂ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ಸೇವೆಯನ್ನು ಸಲ್ಲಿಸುತ್ತಿದೆ ಹಾಗಾಗಿ ನೀವೆಲ್ಲ ಇಟ್ಟಿರುವ ನಂಬಿಕೆ ವಿಶ್ವಾಸವನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸಿಕೊಂಡು ಹೋಗುತ್ತಿದೆ. 2022-2023 ಸಾಲಿನಲ್ಲಿ 66.80,000 ರೂ-ಬಂಡವಾಳದೊಂದಿಗೆ, ರೂ-9,68,51,581 ಠೇವಣಿಗಳೊಂದಿಗೆ, ರೂ-8,61,61,041 ಸಾಲ ನೀಡುವುದರ ಮುಖಾಂತರ ರೂ-35,35,220.29 ನಿವ್ವಳ ಲಾಭವನ್ನು ಗಳಿಸಿದೆ.
ಈ ಸಹಕಾರಿಯಿಂದ ಅನೇಕ ಜನಕ್ಕೆ ಉದ್ಯೋಗ ದೊರಕಿರುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅನೇಕರಿಗೆ ಇದರಿಂದ ಅನುಕೂಲವಾಗುತ್ತಿದೆ ಹಾಗಾಗಿ ಇಲ್ಲಿ ವ್ಯವಹಾರ ಮಾಡುವ ಎಲ್ಲಾ ಠೇವಣಿಗರಿಗೂ ಹಾಗೂ ಸಾಲಗಾರರಿಗೂ, ಎಲ್ಲಾ ನಿರ್ದೇಶಕರಿಗೂ ಮತ್ತು ಇದರಲ್ಲಿ ಸಿಬ್ಬಂದಿ ವರ್ಗದ ಶ್ರಮವೂ ಕೂಡ ಬಹಳಷ್ಟು ಇದೆ ಇಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಧನ್ಯವಾದಗಳು ತಿಳಿಸುವುದರ ಮೂಲಕ ಇದೇ ರೀತಿ ಸಹಕಾರ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದಗಳೊಂದಿಗೆ.......,